ಹೆಂಗಳೊಲವೆಂಬುದು ಅಂಗಜನ ಅರಮನೆ:
ಭಂಗಂಬಡುತ್ತಿದ್ದಾರೆ ನೋಡಾ ತ್ರೈಜಗವೆಲ್ಲ! ಇದು ಕಾರಣ,
ನಿಮ್ಮ ಶರಣರು ಲಿಂಗನೆನಹೆಂಬ ಕಿಚ್ಚ ಹಿಡಿಯಲು
ಅಂಗಜನ ಅರಮನೆ ಉರಿದು, ಭವ ಹೆರೆಹಿಂಗಿತ್ತು ನೋಡಾ,
ಇದೇ ಲಿಂಗದೊಲವು; ನಿಜೈಕ್ಯಪದ.
ಉಳಿದವೆಲ್ಲಾ ಹುಸಿ ಭ್ರಮೆ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Heṅgaḷolavembudu aṅgajana aramane:
Bhaṅgambaḍuttiddāre nōḍā traijagavella! Idu kāraṇa,
nim'ma śaraṇaru liṅganenahemba kicca hiḍiyalu
aṅgajana aramane uridu, bhava herehiṅgittu nōḍā,
idē liṅgadolavu; nijaikyapada.
Uḷidavellā husi bhrame kāṇā,
mahāliṅgaguru śivasid'dhēśvara prabhuvē.