ಗಿರಿಯ ಮೇಲಣ ಕೋಡಗ,
ಹಿರಿಯ ಮಾರಿಯ ನುಂಗಿತ್ತು ನೋಡಾ.
ಹಿರಿಯ ಮಾರಿಯ ನುಂಗಿ ಅವಸ್ಥೆ ಅಡಗದೆ,
ಎಪ್ಪತ್ತೈದು ಗ್ರಾಮವನೆಯಿದೆ ನುಂಗಿತ್ತು ನೋಡಾ.
ದಶಗಮನಂಗಳ ಕೂಡಿ
ವಿಶ್ವತೋ ಪಥದಲ್ಲಿ ನಡೆವುತಿಪ್ಪುದು ನೋಡಾ.
ಒಂದು ಪಥವ ತಾನೆಂದೂ ಅರಿಯದು ನೋಡಾ.
ತಾ ಬಂದಂದಿಂದ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Giriya mēlaṇa kōḍaga,
hiriya māriya nuṅgittu nōḍā.
Hiriya māriya nuṅgi avasthe aḍagade,
eppattaidu grāmavaneyide nuṅgittu nōḍā.
Daśagamanaṅgaḷa kūḍi
viśvatō pathadalli naḍevutippudu nōḍā.
Ondu pathava tānendū ariyadu nōḍā.
Tā bandandinda mahāliṅgaguru śivasid'dhēśvara prabhuvē.