Index   ವಚನ - 144    Search  
 
ಮರ್ಕಟನ ತಲೆಯಲ್ಲಿ ಮಾಣಿಕವಿಪ್ಪುದ ಕಂಡೆನಯ್ಯ. ಆ ಮರ್ಕಟನ ಹಿಡಿದು ಮಾಣಿಕವ ತಕ್ಕೊಳ್ಳಲಾರಳವಲ್ಲ ನೋಡಾ! ಆ ಮರ್ಕಟನ ಕೊಂದು ಮಾಣಿಕವ ತಕ್ಕೊಳ್ಳಬಲ್ಲಡೆ ಮುಕ್ಕಣ್ಣ ಶಿವನೆಂದು ಬೇರುಂಟೆ ಹೇಳ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.