Index   ವಚನ - 150    Search  
 
ಯುವತಿಯರ ವ್ಯವಹಾರವೆಂಬ ವಿಕಳತೆ ಹತ್ತಿ ಯೋಗದ ಸಮತೆ ಸಡಿಲಿತ್ತು ನೋಡಾ. ಸತ್ಯ ಸತ್ತಿತ್ತು, ಭಕ್ತಿಯರತಿತ್ತು. ಮಾಯಾವಿಲಾಸವೆಂಬ ಮೃತ್ಯು ಮುಟ್ಟದ ಮುನ್ನ, ನಿಮ್ಮತ್ತ ಹಿಡಿದು ಎತ್ತಿಕೊಳ್ಳಯ್ಯ, ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭುವೇ.