Index   ವಚನ - 176    Search  
 
ಇಂತು ಅಂತರಂಗದಲ್ಲಿ ಲಿಂಗಧಾರಣವಾಯಿತ್ತೆಂದಡೆ, ಬಹಿರಂಗದಲ್ಲಿ ಅಂಗದ ಮೇಲೆ ಇಷ್ಟಲಿಂಗಧಾರಣವಿಲ್ಲದೆ ಇರಬಹುದೆ? ಇರಬಾರದು ಅದು ವೀರಮಾಹೇಶ್ವರರ ಆಚರಣೆಯಲ್ಲದ ಕಾರಣ. ಎಷ್ಟು ಅರುಹಾದರೂ ಅಂಗದಮೇಲೆ ಶಿವಲಿಂಗ ಧಾರಣವಿಲ್ಲದಿರ್ದಡದು ಅರುಹಲ್ಲ; ಅದು ನಮ್ಮ ಪುರಾತನರ ಮತವಲ್ಲ. ಸಾಕ್ಷಾತ್ ಪರಮೇಶ್ವರನಾದರೂ ಆಗಲಿ, ಅಂಗದ ಮೇಲೆ ಲಿಂಗಧಾರಣವಿಲ್ಲದಿದ್ದರೆ, ಅವನ ಮುಖವ ನೋಡಲಾಗದು ಕಾಣಾ. ಅದೇನು ಕಾರಣವೆಂದರೆ: ಅದು ಶಿವಾಚಾರದ ಪಥವಲ್ಲದ ಕಾರಣ. ಗುರುಕರುಣದಿಂದ ಪಡೆದ ಲಿಂಗವ ಕಕ್ಷೆ ಕರಸ್ಥಲ ಕಂಠ ಉತ್ತಮಾಂಗ ಮುಖ ಸೆಜ್ಜೆ ಅಮಳೋಕ್ಯ ಮೊದಲಾದ ಸ್ಥಾನಂಗಳಲ್ಲಿ ಧರಿಸುವುದೇ ಸತ್ಪಥ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.