Index   ವಚನ - 182    Search  
 
ಭಾವ ಮನಕ್ಕೆ ಲಿಂಗವ ಧರಿಸಿ ಕಾಯಕ್ಕೆ ಲಿಂಗವಿಲ್ಲದಿರಬಹುದೇ? ಎರಡಂಗ ಭಕ್ತರಾಗಿ, ಒಂದಂಗ ಭವಿಯಾಗಿಪ್ಪ ಭ್ರಾಂತರ ಮುಖವ ನೋಡಲಾಗದು. ತನು ಮನ ಭಾವದಲ್ಲಿ ಲಿಂಗವ ಧರಿಸಿ ಲಿಂಗತ್ರಯಕ್ಕೆ ಅಂಗತ್ರಯಕ್ಕೆ ಅಗಲಿಕೆಯಿಲ್ಲದೆ ಅಚಲಿತನಾಗಿರ್ದೆನಯ್ಯ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.