Index   ವಚನ - 190    Search  
 
`ಅನಾದಿ ಶಾಶ್ವತಂ ನಿತ್ಯಂ ಚೈತನ್ಯಂ ಚಿತ್‍ಸ್ವರೂಪಕಂ ಚಿದಂಗ ವೃಷಭಾಕಾರಂ ಚಿದ್ಭಸ್ಮಲಿಂಗಧಾರಣಂ. ಪ್ರಥಮಂ ಗೂಢನಿರ್ನಾಮಂ ದ್ವಿತೀಯಂ ಚಿದ್ರೂಪಕಂ ತೃತೀಯಂ ಚಿದ್ವಿಲಾಸಂ ಚ ಚತುರ್ಥಂ ಭಸ್ಮಧಾರಣಂ ಆಪಾದ ಮಸ್ತಕಾಂತಂ ಚ ರೋಮ ರೋಮ ಭವೇಚ್ಛಿವಃ ಸ್ವಕಾಯಮುಚ್ಯತೇ ಲಿಂಗಂ ವಿಭೂತ್ಯುದ್ಧೂಳನಾತ್ ಭವೇತ್'. ಎಂದುದಾಗಿ ಅನಾದಿ ಶಾಶ್ವತ ನಿತ್ಯ ಪರಶಿವಸ್ವರೂಪು ತಾನೇ ನೋಡಾ ಶ್ರೀವಿಭೂತಿ. ಪರಶಿವನ ಪರಮ ಚೈತನ್ಯ ಚಿತ್ ಸ್ವರೂಪು ತಾನೇ ನೋಡಾ ಶ್ರೀ ವಿಭೂತಿ. ಚಿದಂಗ ವೃಷಭಾಕಾರ ತಾನೇ ನೋಡಾ ಶ್ರೀವಿಭೂತಿ. ಆ ಚಿದ್ಭಸ್ಮವನೆ ನೀ ಧರಿಸಿಪ್ಪೆಯಯ್ಯ. ನೀನೊಲಿದು ಧರಿಸಿದ ಪರಮಪಾವನ ಚಿದ್ಭಸ್ಮವನೆ ನಾನು ಸರ್ವಾಂಗದಲ್ಲಿ ಧರಿಸಿ, ಸರ್ವಾಂಗವೆಲ್ಲವು ಶಿವಮಯವಾಗಿರ್ದೆನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.