ಇದು ಕಾರಣ, ದೇವಗುರು ನಿರೂಪಿಸಿದ ಷಡಕ್ಷರಮಂತ್ರವನಗಲ್ದು
ಹುಟ್ಟಿ ಸಾವ, ಕೆಡುವ ಮಂತ್ರತಂತ್ರಯಂತ್ರಾದಿಗಳ ಕಲಿತು
ಬದುಕಿಹೆನೆಂಬ ಕಾಳ್ವಿಚಾರವ ಬಿಡು ಗಡಾ ಮನುಜರಿರಾ.
``ಓಂ ನಮಃ ಶಿವಾಯ ಇತಿ ಮಂತ್ರಸ್ಸರ್ವ ಮಂತ್ರಾಕ ಸ್ಥಾಪಯೇತ್"
ಎಂಬ ಬಿರಿದು ಕಾಣಿರೋ.
ಎಲ್ಲ ಮಂತ್ರಕ್ಕೂ ಶಿವಮಂತ್ರವೇ ಗುರುವೆಂದರಿಯದೆ,
ಅನ್ಯನಾಮವಿಡಿದು ಬಳಲುವ ಅನಾಚಾರಿಗಳ ಕಂಡಡೆ
ಎನ್ನ ಮನ ನಚ್ಚದು ಮಚ್ಚದಯ್ಯ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Idu kāraṇa, dēvaguru nirūpisida ṣaḍakṣaramantravanagaldu
huṭṭi sāva, keḍuva mantratantrayantrādigaḷa kalitu
badukihenemba kāḷvicārava biḍu gaḍā manujarirā.
``Ōṁ namaḥ śivāya iti mantras'sarva mantrāka sthāpayēt
emba biridu kāṇirō.
Ella mantrakkū śivamantravē guruvendariyade,
an'yanāmaviḍidu baḷaluva anācārigaḷa kaṇḍaḍe
enna mana naccadu maccadayya.
Mahāliṅgaguru śivasid'dhēśvara prabhuvē.