Index   ವಚನ - 202    Search  
 
ಆಧಾರ ಚಕ್ರದಲ್ಲಿ ನಕಾರ ಸ್ವಾಯತ. ಸ್ವಾಧಿಷ್ಠಾನ ಚಕ್ರದಲ್ಲಿ ಮಃಕಾರ ಸ್ವಾಯತ. ಮಣಿಪೂರಕ ಚಕ್ರದಲ್ಲಿ ಶಿಕಾರ ಸ್ವಾಯತ. ಅನಾಹತ ಚಕ್ರದಲ್ಲಿ ವಾಕಾರ ಸ್ವಾಯತ. ವಿಶುದ್ಧಿ ಚಕ್ರದಲ್ಲಿ ಯಕಾರ ಸ್ವಾಯತ. ಆಜ್ಞಾ ಚಕ್ರದಲ್ಲಿ ಓಂಕಾರ ಸ್ವಾಯತ. ಇದು ಕಾರಣ, ಶರಣನ ಕಾಯವೇ ಷಡಕ್ಷರಮಂತ್ರ ಶರೀರವಾಗಿ, ಸರ್ವಾಂಗವೆಲ್ಲವು ಜ್ಞಾನ ಕಾಯ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.