Index   ವಚನ - 210    Search  
 
ಮಾನಸ ವಾಚಕ ಉಪಾಂಶಿಕವೆಂದು ಪ್ರಣವ ಪಂಚಾಕ್ಷರಿಯ ಜಪ ಮೂರು ತೆರನಾಗಿಪ್ಪುದು. ಮನಸಿನಲ್ಲಿಯೆ ಪ್ರಣವಮಂತ್ರವ ಸ್ಮರಿಸುವುದು ಮಾನಸ. ವಾಕ್ಯದಿಂದ `ಶಿವಾಯ ಹರಾಯ ಭವಾಯ ಮೃಡಾಯ ಮೃತ್ಯುಂಜಯಾಯ ಸೋಮಶೇಖರ ಪ್ರಭವೇ ವಿಭವೇ ಶಿವಶಿವಾ ಶರಣು ಶರಣೆಂಬುದೇ ವಾಚಕ. ಕ್ರಿಯಾಕಾಲದಲ್ಲಿ ಇತರವಾಗಿ ಒಬ್ಬರು ಕೇಳದ ಹಾಗೆ ತನ್ನ ಕಿವಿ ಕೇಳುವ ಹಾಗೆ ಶಿವ ಮಂತ್ರದಲ್ಲಿ ಸುಯಿಧಾನಿಯಾಗಿ ಪುನಃಶ್ಚರಣೆಯಾಗಿ ತ್ರಿಸಂಧ್ಯಾಕಾಲದಲ್ಲಿ ಬಿಡದೆ ಉಚ್ಚರಿಸುವುದೀಗ ಉಪಾಂಶಿಕ. ಈ ಮೂರು ಪ್ರಕಾರದಲ್ಲಿ ಶಿವಮಂತ್ರವ ಜಪಿಸಬೇಕು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.