ವಚನ - 1382     
 
ಬೆಳಗಿನೊಳಗಣ ಬೆಳಗ ಕಡಿದಡೆ ಮರಳಿ ಕೂಡಿತ್ತಲ್ಲಾ! ಮೇರುವನೆ ಬೋನವ ಮಾಡಿ ಸವಿದ ಭಕ್ತರ ನೋಡಾ! ಅಡಗನಾರೋಗಣೆಯ ಮಾಡಿದ ಲಿಂಗವ ಕೊಡಗೂಸು ನುಂಗಿತ್ತ ಕಂಡೆ ಗುಹೇಶ್ವರಾ.