Index   ವಚನ - 231    Search  
 
ಗುರುಪ್ರಸಾದಕ್ಕೆ ಹೇಸುವರು, ಲಿಂಗಪ್ರಸಾದಕ್ಕೆ ಹೇಸುವರು, ಜಂಗಮ ಪ್ರಸಾದಕ್ಕೆ ಹೇಸುವರು, ಭಕ್ತಪ್ರಸಾದಕ್ಕೆ ಹೇಸುವರು. ಹೊಲತಿ ಮಾದಿಗಿತ್ತಿ ಬಲ್ಲವಳಾದರೆ, ಹಲವು ಪರಿಯಲ್ಲಿ ಅವಳೆಂಜಲ ತಿನುತಿಪ್ಪರು ನೋಡಾ ಜಗ. ಹದಿನೆಂಟು ಜಾತಿಯ ಎಂಜಲ ಹೇಹವಿಲ್ಲದೆ ತಿಂಬ ಭವಜಾತಿಗಳಿಗೆ ಪ್ರಸಾದ ದೊರಕೊಂಬುದೆ? ದೊರಕೊಳ್ಳದು. ಆದೇನುಕಾರಣವೆಂದಡೆ: ಭವಭವದಲ್ಲಿ ಯೋನಿಚಕ್ರದಲ್ಲಿ ತಿರುಗುತ್ತಿಪ್ಪರಾಗಿ. ಈ ಅಶುದ್ಧಜೀವಗಳಿಗೆ ಶುದ್ಧವಹ ಶಿವಪ್ರಸಾದದಲ್ಲಿ ಸಂಬಂಧ ಸಮನಿಸದು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.