Index   ವಚನ - 237    Search  
 
ಭರಿತಬೋನ ಭರಿತಬೋನವೆಂದು ಒಂದೆ ವೇಳೆ ಬಾಚಿಸಿಕೊಂಡು ಲಿಂಗಕ್ಕೆ ಕೊಟ್ಟೆವು ಲಿಂಗಪ್ರಸಾದವಾಯಿತ್ತೆಂದು ಬಿಗಿಬಿಗಿದು ಕಟ್ಟಿಕೊಂಡು ಮತ್ತೊಂದು ಪದಾರ್ಥ ಬಂದರೆ ಲಿಂಗವ ಬಿಡಲಮ್ಮರಯ್ಯ. ಆ ಪದಾರ್ಥವ ಕಂಡು ಮನದಲ್ಲಿ ಬಯಸಿ ಕುದಿಕುದಿದು ಕೋಟಲೆಗೊಂಡು ಹಲ್ಲು ಬಾಯಾರುತ್ತಿಪ್ಪರಯ್ಯ. ಅದೇಕೆ ಲಿಂಗವ ಬಿಡಲಮ್ಮಿರಿ ಕೈಯೇನು ಎಂಜಲೆ? ಕೈಯೆಂಜಲಾದಂಗೆ ಬಾಯೆಲ್ಲಾ ಎಂಜಲು. ಬಾಯೆಂಜಲಾದವಂಗೆ ಸರ್ವಾಂಗವೆಲ್ಲಾ ಎಂಜಲು. ಎಂಜಲೆಂದರೆ ಅಮೇಧ್ಯ. ಅಮೇಧ್ಯದ ಮೇಲೆ ಲಿಂಗವ ಧರಿಸಿಪ್ಪಿರಿಯೆ ಹೇಳಿರಣ್ಣ? ಈ ಸಂದೇಹಿಭ್ರಾಂತಿಯ ಕೈವಿಡಿಯಲೊಲ್ಲರು ನಿಮ್ಮಶರಣರು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.