•  
  •  
  •  
  •  
Index   ವಚನ - 1384    Search  
 
ಬೆಳಗುವ ಜ್ಯೋತಿಯ ತಿರುಳಿನಂತೆ ಹೊಳೆವ ಕಂಗಳ ಕಾಂತಿ, ಒಳಹೊರಗೆನ್ನದೆ ಅಳವಟ್ಟ ಶಿವಯೋಗಿಯ ಕಂಡೆ ನೋಡಾ! ನಿಜ ಉಂಡ ನಿರ್ಮಲದ ಘನವ ಕಂಡು ಬೆರಗಾದೆ ನಾನು, ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣನಿಂದ ಆನು ಬದುಕಿದೆನು.
Transliteration Beḷaguva jyōtiya tiruḷinante hoḷeva kaṅgaḷa kānti, oḷahoragennade aḷavaṭṭa śivayōgiya kaṇḍe nōḍā! Nija uṇḍa nirmalada ghanava kaṇḍu beragāde nānu, guhēśvaraliṅgadalli cennabasavaṇṇaninda ānu badukidenu.
Hindi Translation चमकती ज्योति का सार जैसे शोभित आँखों की कांति, अंदर बाहर न कहे मिले शिवयोगी को देख निज खाया निर्मल घन देख चकित हुआ मैं गुहेश्वर लिंग में चेन्नबसवण्णा से मैं जिया। Translated by: Eswara Sharma M and Govindarao B N