Index   ವಚನ - 245    Search  
 
ಅಂತರಂಗದಲ್ಲಿ ಜ್ಞಾನ, ಬಹಿರಂಗದಲ್ಲಿ ಕ್ರಿಯೋಪಚಾರಯಿರುತ್ತಿರಲಿಕ್ಕಾಗಿ ಏಕಭಾವನೆನಿಸಿಕೊಂಬುದಯ್ಯ. ಅದು ಹೇಗೆಂದಡೆ: ಹೊರಗೆ ಅಗ್ನಿ ಉರಿವುತಿಪ್ಪುದಯ್ಯ. ಕುಂಭದಲ್ಲಿ ಉದಕವಿಪ್ಪುದು. ಅಗ್ನಿಯ ಜ್ವಾಲೆಯ ಸಾಮರ್ಥ್ಯದಿಂದ ಕುಂಭದೊಳಗಿನ ಉದಕವು ಹೇಂಗೆ ಉಷ್ಣವಪ್ಪುದು ಹಾಂಗೆ ಜ್ಞಾನ ಸತ್ಕ್ರಿಯೋಪಚಾರವ ಮಾಡಲಾಗಿ ಪ್ರಾಣವೆ ಲಿಂಗಸ್ವರೂಪವಪ್ಪುದು ತಪ್ಪದಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ!