Index   ವಚನ - 257    Search  
 
ತನುವಿನೊಳಗೆ ತನುವಾಗಿಪ್ಪಿರಯ್ಯ. ಮನದೊಳಗೆ ಮನವಾಗಿಪ್ಪಿರಯ್ಯ. ಭಾವದೊಳಗೆ ಭಾವವಾಗಿಪ್ಪಿರಯ್ಯ. ಎನ್ನಂಗ ಪ್ರಾಣ ಮಹಾಲಿಂಗ ನೀವೆಯಾದ ಕಾರಣ ಎನ್ನಗಿನ್ನಾವ ಭಂಗವೂ ಇಲ್ಲ ನೋಡಾ. ಅದೇನು ಕಾರಣವೆಂದಡೆ: ಎನ್ನಂಗವು ನಿಮ್ಮೊಳಗಡಗಿ ಶುದ್ಧ ಪರಮಾತ್ಮನಾದೆನು ಕಾಣಾ. ಇನ್ನಾವ ಪ್ರಪಂಚೂ ಎನಗಿಲ್ಲ ನೀನು ನಿರ್ಲೇಪಕನಾದ ಕಾರಣ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.