Index   ವಚನ - 296    Search  
 
ತತ್ವರ್ಥವ ಬಲ್ಲೆವೆಂಬರಯ್ಯಾ ತತ್ತಿಯೊಳಗಣ ಬಾಲಕರು. ತತ್ವನುಭಾವ ಸಂಭವಿಸಿದರೆ ಸತ್ತು ಹೋಗಲುಂಟೆ? ಸತ್ತು ಹೋಗುವ ಪ್ರಾಣಿಗಳ ಶಿವತತ್ವನುಭಾವಿಗಳೆಂತೆಂಬೆನಯ್ಯ? ಅನುಪಮ ಅದ್ವಯರೆಂತೆಂಬೆನಯ್ಯ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.