Index   ವಚನ - 302    Search  
 
ಜಂಗಮಕ್ಕೊಂದನಿಕ್ಕಿ ತಾನೊಂದನುಂಬನೆ ಪ್ರಸಾದಿ? ಜಂಗಮ ಉಂಡರೆ ಮನದಲ್ಲಿ ಮರುಗುವನೆ ಪ್ರಸಾದಿ? ಜಂಗಮಕ್ಕೆ ತಳಿಗಳ ತಳಿದು ತಾ ಗಂಗಳ ತುಂಬಿ ಒಟ್ಟಿಸಿಕೊಂಡು ಕೊಂಬನೆ ಪ್ರಸಾದಿ? ಪ್ರಸಾದಿಯಂತೆ ಪ್ರಪಂಚುಂಟೆ? ಕಕ್ಕುಲತೆಯ ಮಾಡಿಕೊಂಡನಾದರೆ ನಾಯಮಾಂಸ ತಿಂದ ಸಮಾನ ಕಾಣಿರೊ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.