ಮಣ್ಣ ಮಚ್ಚಿ ಮನೆಯ ಮಚ್ಚಿದವಂಗೆ
ಗುರುವಿನ ಮಚ್ಚೆಲ್ಲಿಯದೊ?
ಹೆಣ್ಣ ನಚ್ಚಿ ಹೊನ್ನ ನಚ್ಚಿದವಂಗೆ
ಲಿಂಗದ ಮಚ್ಚೆಲ್ಲಿಯದೊ?
ಹೆಂಡತಿ ಮಕ್ಕಳು ಬಂಧುಗಳು ಹಿತರೆಂದು ಮಚ್ಚಿದವರಿಗೆ
ಜಂಗಮದ ಮಚ್ಚೆಲ್ಲಿಯದೊ?
ಗುರು ಲಿಂಗ ಜಂಗಮವ ನಂಬದವರಿಗೆ
ಮುಕ್ತಿಯೆಂಬುದು ಕನಸಿನಲ್ಲಿಯೂ ಇಲ್ಲವಯ್ಯ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ,
ನಿಮ್ಮ ನಂಬದ ಪಾಪಿಗಳಿಗೆ.