Index   ವಚನ - 314    Search  
 
ಅಂಗಗುಣವುಂಟೆ ಲಿಂಗವನೊಳಕೊಂಡ ನಿರಂಗ ಸಂಗಿಗೆ? ಆತ್ಮಗುಣವುಂಟೆ ಪರಮಾತ್ಮಲಿಂಗ ಸಂಬಂಧಿಗೆ? ಅಹಂಭಾವವುಂಟೇ ತಾನೆಂಬ ಭಾವವಳಿದು ದಾಸೋಹಂ ದಾಸೋಹಂ ಎಂಬ ನಿರ್ಮಲ ನಿರಾವರಣಂಗೆ? ಸಂದೇಹಾವರಣ ಎಂದೂ ಇಲ್ಲ ನೋಡಾ. ತಾನೆಂದೆಂದೂ ಇಂದುಧರನಂಗದಲ್ಲಿ ಉದಯವಾಗಿ ಬಂದನಾಗಿ, ಹುಟ್ಟಿದ ಬಟ್ಟೆಯ ಮೆಟ್ಟಿ ನಡೆದು ಹುಟ್ಟಿದಲ್ಲಿಯೆ ಹೊಂದುವಾತನೆ ಮಾಹೇಶ್ವರನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.