Index   ವಚನ - 340    Search  
 
ಅರಳಿಯೆಲೆಯ ಮೇಯ ಬಂದ ಎರಳೆ ಹಾರಿಬಿದ್ದುದ ಕಂಡೆನಯ್ಯ. ಅರಳಿಯೆಲೆಯ ಹರಿಯಲು ಎರಳೆ ಎದ್ದೋಡಿತ್ತು ನೋಡಾ. ಓಡಿಹೋದ ಎರಳೆ ಅಡಗಿದ ಠಾವ ಬಲ್ಲರೆ, ಪ್ರಾಣಲಿಂಗ ಸಂಬಂಧಿಗಳೆಂಬೆ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.