Index   ವಚನ - 345    Search  
 
ಸಣ್ಣನ ನೂಲುವ ಚಿಣ್ಣಂಗೆ ಬಣ್ಣ ಮುನ್ನಿಲ್ಲ ನೋಡಯ್ಯ. ಚಿಣ್ಣ ತಾನಾದರೇನಯ್ಯ? ಬಣ್ಣವುಳ್ಳವರ ಕಣ್ಣಿಗೆ ಕಾಣಿಸನು ನೋಡಯ್ಯ. ಬಣ್ಣವಳಿದು ಕಣ್ಣ ಕತ್ತಲೆ ಹರಿದಲ್ಲದೆ ಚಿಣ್ಣನ ಕಾಣಬಾರದಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ