Index   ವಚನ - 367    Search  
 
ಎನ್ನಂತರಂಗದೊಳಗಣ ಆತ್ಮಲಿಂಗ, ಅನಂತ ಜ್ಯೋತಿಯಂತಿಪ್ಪುದು ನೋಡಾ. ಬಹಿರಂಗದಲ್ಲಿ ನವರತ್ನದಂತಿಪ್ಪುದಯ್ಯ. ತಿಂಗಳ ಸೂಡಿದಭವನು ಭವಭಂಗಿತರಿಗಾರಿಗೂ ಗೋಚರಿಸನು ಕಾಣಾ. ಲಿಂಗನಿಷ್ಠಾಂಗಿಗಳಿಗೆ ಮಂಗಳಮಯನಾಗಿ ತೋರ್ಪನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೇ ಕಾಣಿರೋ.