Index   ವಚನ - 372    Search  
 
ನಾದ, ಬಿಂದು, ಕಳಾ ಭೇದವ ತಿಳಿದಲ್ಲದೆ ಆರಕ್ಷರವಾದ ತೆರನನರಿಯಬಾರದು. ಆರಕ್ಷರಕ್ಕೆ ಮೂಲಪ್ರಣವವ ತಿಳಿದಲ್ಲದೆ ನಾದ ತಲೆದೋರದು. ನಾದ ಬೆಳಗಿನ ಕಳೆಯ ನೋಡಿ ಕಂಡಲ್ಲದೆ ರಾಜ ಶಿವಯೋಗಿಯಾಗಬಾರದು. ರಾಜ ಶಿವಯೋಗಿವೆಂಬುದು ಆದಿಯಲ್ಲಿ ಶಿವಬೀಜವಾದ ಮಹಾಮಹಿಮನಿಗೆ ಸಾಧ್ಯವಪ್ಪುದಲ್ಲದೆ ತ್ರೈಜಗದಲಾರಿಗೂ ಅಸಾಧ್ಯ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.