Index   ವಚನ - 378    Search  
 
ತಲೆವಾಲೊಸರಲು ನೆಲ ಬೆಂದು ನೀರರತು ಕಿಚ್ಚು ಕೆಟ್ಟಿತ್ತು ನೋಡಾ ಗಾಳಿಯ ದೂಳಿಯ ದಾಳಿನಿಂದು ಅಂಬರದ ಸಂಭ್ರಮವಡಗಿತ್ತು ನೋಡಾ. ಹಾಲಕುಡಿದ ಶಿಶು ಸತ್ತು ತಾನು ತಾನಾದುದ ಏನೆಂದುಪಮಿಸುವೆನಯ್ಯ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.