Index   ವಚನ - 385    Search  
 
ತಾನೊಬ್ಬನು; ಕೊಲುವರು ಹಲಬರು. ಹಲವು ದಿಕ್ಕಿನ ಕಿಚ್ಚೆದ್ದು ಸುಡುವಲ್ಲಿ ನೆಲನ ಮರೆಹೊಗಲು ಜಲಮಯವಾಯಿತ್ತು ನೋಡಾ. ಜಲದೊಳಗಾಳುವನ ಜಲಂಧರ ರಕ್ಕಸ ಭಕ್ಷಿಸುತ್ತಿರಲು ಆಕಟಕಟಾ ಶಿವನೇ ಎನಲು ಮುಕ್ಕಣ್ಣ ತೆರೆದನು; ರಕ್ಕಸನ ಸೊಕ್ಕು ಮುರಿಯಿತ್ತು, ಕೊಲುವರು ಹಲಬರು ನೆಲನ ಬಿಟ್ಟೋಡಿದರು. ಹಲವು ದಿಕ್ಕಿನ ಕಿಚ್ಚು ಕೆಟ್ಟಿತ್ತು. ನೆಲ ಕರಗಿತ್ತು; ಜಲವರತಿತ್ತು. ಜಲಧಿಯ ದಾಂಟಿ, ಅಮೃತ ಸಾಗರವ ಬೆರಸಿ ಅನುಪಮಸುಖಿಯಾದೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.