Index   ವಚನ - 393    Search  
 
ಅಂಗವಿಲ್ಲದ ಅನಾಮಯನ ಕಂಗಳಿಲ್ಲದೆ ಕಂಡೆ. ಕಾಯವಿಲ್ಲದೆ ಅಪ್ಪಿದೆ. ಮನವಿಲ್ಲದೆ ನೆನೆದೆ. ಭಾವವಿಲ್ಲದೆ ಭಾವಿಸಿ ಮಾಯವಿಲ್ಲದೆ ಸಂಗವ ಮಾಡಿ ನಿಸ್ಸಂಗಿಯಾದೆನು. ನಿರುಪಾಧಿಕ ನಿಷ್ಕಳಂಕ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.