Index   ವಚನ - 396    Search  
 
ಸುರತರುವ ಬಿಟ್ಟು ಎಲವದ ಮರಕೆ ನೀರೆರೆವಂತೆ ನೊರೆವಾಲ ಚಲ್ಲಿ ಕಾಟೆಯ ಬಯಸಿ ಬಾಯಾರುವಂತೆ ತಾಯ ಮಾರಿ ತೊತ್ತ ಕೊಂಬವರಂತೆ ರಂಭೆಯ ಬಿಟ್ಟು ಸಿಂಬೆಯ ಬಯಸುವ ಶಿಖಂಡಿಗಳಂತೆ, ನಿತ್ಯವಲ್ಲದ ನಿರುತವಲ್ಲದ ಸತ್ತು ಹೋಹ ಮಾಯಾಪ್ರಪಂಚ ಮಚ್ಚಿದ ಮನುಜರು ಮುಕ್ತ್ಯಂಗನೆಯನಪ್ಪಿ ಭಕ್ತ್ಯಮೃತವ ಸೇವಿ[ಸುವ]ಸಿ ನಿತ್ಯಪದದ ಸುಖವ ವ್ಯರ್ಥಕಾಯರಿವರೆತ್ತಬಲ್ಲರು ಹೇಳ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.