•  
  •  
  •  
  •  
Index   ವಚನ - 140    Search  
 
ಕಾಯದೊಳಗಣ ಜೀವವ ಮೀರಿ ಹೋಹ ಕಳ್ಳನ ಸಂಗ ಬೇಡ. ನಿಮ್ಮ ನಿಮ್ಮ ವಸ್ತುವ ಸುಯಿಧಾನವ ಮಾಡಿಕೊಳ್ಳಿ. ಗುಹೇಶ್ವರನೆಂಬ ಕಳ್ಳನ ಕೊಂದಡೆ ಅಳುವವರಾರೂ ಇಲ್ಲ!
Transliteration Kāyadoḷagaṇa jīvava mīri hōha kaḷḷana saṅga bēḍa. Nim'ma nim'ma vastuva suyidhānava māḍikoḷḷi. Guhēśvaranemba kaḷḷana kondaḍe aḷuvavarārū illa!
Hindi Translation शरीर जीव सीमा से बाहर गया चोर का संग नहीं चाहिए। अपनी अपनी वस्तु की रक्षाकर लीजिए। गुहेश्वर नामक चोर को मारे तो रोनेवाला कोई नहीं। Translated by: Eswara Sharma M and Govindarao B N
Tamil Translation உடலிலுள்ள உயிரை மீறிச் சென்ற கள்ளனின் தொடர்பு எதற்கு? உங்கள் உங்கள் பொருளை தியானம் செய்வீர் குஹேசுவரனெனும் கள்ளனைக் கொன்றால் அழுபவர் எவருமில்லை. Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಳ್ಳ = ಅಗೋಚರನಾದ ಸರ್ವಾಂತರ್ಯಾಮಿಯು; ಜೀವವ ಮೀರಿ = ಜೀವಾತ್ಮನಿಗೆ ಪರಮ ಸಾಕ್ಷಿಯಾಗಿ; ವಸ್ತು = ಶ್ರೀಗುರು ಕರುಣಿಸಿದ ಅಮೂಲ್ಯಸಂಪದ; ಇಷ್ಟಲಿಂಗ; ಸಂಗ = ಗೊಡವೆ, ಅವನ ಚಿಂತೆ; ಸುಯಿಧಾನ = ಲಕ್ಷ್ಯ, ಧ್ಯೇಯ, ಅನುಸಂಧಾನಯೋಗ್ಯ ವಸ್ತು; Written by: Sri Siddeswara Swamiji, Vijayapura