ವಚನ - 1400     
 
ಭಕ್ತಿಯನಾರು ಬಲ್ಲರು? ಬಲ್ಲವರನಾರನೂ ಕಾಣೆ. ತನ್ನ ಮರೆದು ಇದಿರ ಹರಿದು ಇರಬಲ್ಲಡೆ ಆತ ಭಕ್ತ. ಆ ಭಕ್ತಂಗೆ ಶಿವನೊಲಿವ. ನುಡಿಯಲ್ಲಿ ಭಕ್ತಿಯನಾಡಿ ನಡೆಯಲ್ಲಿ ಇಲ್ಲದಿದ್ದಡೆ ಕಡೆಮುಟ್ಟಿ ಶಿವನೊಲಿವುದು ಹುಸಿ. ಮರೆದು ಕೋಪದುರಿಯನುಗುಳಿ, ಅರಿದು ಬಂದೆರಗಿದೆನೆಂಬ ನುಡಿಗೆ ಒಲಿವನೆ ನಮ್ಮ ಗುಹೇಶ್ವರಲಿಂಗವು?