Index   ವಚನ - 402    Search  
 
ಕತ್ತೆಗೇಕಯ್ಯ ಕಡಿವಾಣ, ತೊತ್ತಿಗೆ ತೋಳಬಂದಿಯೇಕಯ್ಯ? ಶ್ವಾನಗೇಕೆ ಆನೆಯ ಜೋಹವಯ್ಯ? ಹಂದೆಗೇಕೆ ಚಂದ್ರಾಯುಧವಯ್ಯ? ಶಿವನಿಷ್ಠೆಯಿಲ್ಲದವಂಗೆ ವಿಭೂತಿ ರುದ್ರಾಕ್ಷಿ ಶಿವಮಂತ್ರ ಶಿವಲಿಂಗವೆಂಬ ಶಿವಚೋಹವೇತಕಯ್ಯ ಇವರಿಗೆ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.