Index   ವಚನ - 404    Search  
 
ಹಾವಿನೊಳಗಣ ಸಂಗ ಆವಾಗಲೆಂದರಿಯಬಾರದಯ್ಯ. ಕಿಚ್ಚಿನೊಳಗಣ ಸಂಗ ಸುಟ್ಟು ಭಸ್ಮವ ಮಾಡುವದಯ್ಯ. ಲಿಂಗದೃಷ್ಟಿ ತಪ್ಪಿ, ಅಂಗನೆಯರ ನೋಟ ಬೇಟ ಕಂಗಳ ಕೆಡಿಸಿ ಭಂಗಿತರ ಮಾಡುವುದಯ್ಯ. ಪರಸ್ತ್ರೀಯರ ಕೂಟ ಪಂಚಮಹಾಪಾತಕದಲ್ಲಿಕ್ಕುವುದಯ್ಯ. ಧರೆಯೊಳಕೊಳ್ಳದು; ಹಿರಿಯರು ಮಚ್ಚರು. ಹಿರಿಯರು ಮಚ್ಚರಾಗಿ ಶಿವ ಮುನ್ನವೆ ಮಚ್ಚನು. ನಾಯಕನರಕ ತಪ್ಪದಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.