Index   ವಚನ - 411    Search  
 
ಭಕ್ತಂಗೆ ಲಿಂಗವಾವುದು, ಮಾಹೇಶ್ವರಂಗೆ ಲಿಂಗವಾವುದು, ಪ್ರಸಾದಿಗೆ ಲಿಂಗವಾವುದು, ಪ್ರಾಣಲಿಂಗಿಗೆ ಲಿಂಗವಾವುದು, ಶರಣಂಗೆ ಲಿಂಗವಾವುದು, ಐಕ್ಯಂಗೆ ಲಿಂಗವಾವುದುಯೆಂದರೆ ಈ ಲಿಂಗಸ್ಥಲಂಗಳ ಭೇದವ ಹೇಳಿಹೆನಯ್ಯಾ. ಭಕ್ತಂಗೆ ಆಚಾರಲಿಂಗ. ಮಾಹೇಶ್ವರಂಗೆ ಗುರುಲಿಂಗ. ಪ್ರಸಾದಿಗೆ ಶಿವಲಿಂಗ. ಪ್ರಾಣಲಿಂಗಿಗೆ ಜಂಗಮಲಿಂಗ. ಶರಣಂಗೆ ಪ್ರಸಾದಲಿಂಗ. ಐಕ್ಯಂಗೆ ಮಹಾಲಿಂಗವೆಂದು ಹೇಳಲ್ಪಟ್ಟಿತ್ತಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.