Index   ವಚನ - 420    Search  
 
ಸಂಗ್ರಹದ ಮನೆಯಲ್ಲಿ ಭೃಂಗೀಶ್ವರನೆದ್ದು ಲಿಂಗಲೀಲೆಯಾಡುವುದ ಕಂಡೆನಯ್ಯ. ನಂದೀಶ್ವರ ಮುಖ್ಯರಾದ ಪ್ರಮಥರು ನಲಿದಾಡುತ್ತಿದಾರೆ ನೋಡ ಅಯ್ಯ. ಸಂಗ್ರಹದ ಮನೆಯಳಿದು ಭೃಂಗಿ ಸಿಕ್ಕದೆ ಭಂಗಿತರಾದರಲ್ಲಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.