ವಚನ - 1402     
 
ಭಕ್ತಿಯೆಂಬ ಸಯಧಾನ ಬಸವಣ್ಣನಿಂದ ಎನಗಾಯಿತ್ತು. ಪ್ರಸಾದವೆಂಬ ಪರಿಣಾಮ ಮರುಳುಶಂಕರದೇವರಿಂದ ಎನಗಾಯಿತ್ತು. ಏಕೋಭಾವದ ನಿಷ್ಠೆ ಸಿದ್ಧರಾಮಯ್ಯದೇವರಿಂದ ಎನಗಾಯಿತ್ತು. ಸರ್ವಜೀವ ಪರಿಪೂರ್ಣಕಳೆ ಚೆನ್ನಬಸವಣ್ಣನಿಂದ ಎನಗಾಯಿತ್ತು. ಆದ ನಿಜದ ನೆಲೆ ಗುಹೇಶ್ವರಲಿಂಗವೆಂಬ ನಾಮವಾಯಿತ್ತು.