ವಚನ - 1403     
 
ಭರಿತಭೋನ ಭರಿತಭೋನ ಎಂದು, ಭ್ರಮೆಗೊಂಡು ಭ್ರಮಿತರಾದರೀಲೋಕವೆಲ್ಲ. ಭರಿತಭೋಜವೆ ದಿಟವಾದಡೆ ಮರ್ತ್ಯದಲ್ಲಿ ಸುಳಿಯಲುಂಟೆ? ಚತುರ್ವಿಧ ಅರ್ಪಿತದೊಳಗೆ, ಆವುದು ಭರಿತ ಎಂಬುದನರಿಯರಾಗಿ, ಗುಹೇಶ್ವರಲಿಂಗದಲ್ಲಿ ಭರಿತಭೋಜದ ಅನುವು, ಚೆನ್ನಬಸವಣ್ಣಂಗಾಯಿತ್ತು!