Index   ವಚನ - 430    Search  
 
ಲಿಂಗಕ್ಕೂ ಪ್ರಾಣಕ್ಕೂ ಭೇದವಿಲ್ಲೆಂದರಿದು ಲಿಂಗಾರ್ಚನೆಯ ಮಾಡಿ ಈ ಪ್ರಕಾರದಲ್ಲಿ ಆಚರಿಸಲಾಗಿ ಷಟ್‍ಪ್ರಕಾರವಪ್ಪ ಲಿಂಗವು ಕ್ರಮ ತಪ್ಪದೆ ಸಾಧ್ಯವಪ್ಪುವು. ಸಂಕಲ್ಪ ವಿಕಲ್ಪವಿಲ್ಲದೆ ಹೀಂಗೆಂದರಿಯಲು ಆ ಪ್ರಾಣನು ಲಿಂಗಪ್ರಭೆಯೊಳಗೋಲಾಡುತ್ತಿಪ್ಪುದಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.