Index   ವಚನ - 449    Search  
 
ನೂಲೆಳೆಯ ತೋರದ ಮರದಲ್ಲಿ ಬೆಟ್ಟದ ತೋರ ಕಾಯಿ ಫಲವಾದುದ ಕಂಡೆನಯ್ಯ. ಮರನನೇರಿ ಕಾಯಿ ಕೊಯಿವನ್ನಕ್ಕರ ಭವಭಾರ ಹಿಂಗದು ನೋಡಾ. ಮರವನೇರದೆ ಕಾಯ ಮುಟ್ಟದೆ ಮೇಲಣ ಹಣ್ಣಿನ ರುಚಿಯ ಚೆನ್ನಾಗಿ ಸ್ವೀಕರಿಸಬಲ್ಲಾತನಲ್ಲದೆ ಶಿವಶರಣನಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.