Index   ವಚನ - 454    Search  
 
ದೇಹಾದಿಗುಣವಿಲ್ಲದ ಜಾತಿ ವರ್ಣಾಶ್ರಮ ನಾಮರೂಪಿಲ್ಲದ ಜಿಹ್ವಾಲಂಪಟತ್ವವಿಲ್ಲದ ಮದ ಮೋಹಾದಿಗಳಿಲ್ಲದ ಮಾಯಾದೇಹದ ಮಲತ್ರಯದ ದುರ್ವಾಸನೆಯಿಲ್ಲದ ಸಂಗ ಸಂಯೋಗ ಸಂಬಂಧವೆಂಬ ಇಂದ್ರಿಯಂಗಳ ಬಂಧವಿಲ್ಲದ ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿಪುಟಿಯಿಲ್ಲದ ತ್ರಿಪುಟಿಯ ಮೀರಿ, ತ್ರಿಪುಟಿಗೆ ನಿಲುಕದ ಸ್ಥಾನದ ಅರುಹಿನ ಪರಬ್ರಹ್ಮವೇ ಶರಣ ಲಿಂಗ ಕಾಣಿಭೋ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನ ಶರಣರು ಅದ್ವೈತಾನಂದದಿಂದ ಸಂಪೂರ್ಣ ಕಾಣಿರೋ.