ಜಂಗಮದ ಗುಣವನು, ಜಂಗಮದ ಭೇದವನು
ಜಂಗಮದ ರೂಪವನು ಹೇಳಿಹೆ ಕೇಳಿರಣ್ಣಾ.
ಜಂಗಮವೆಂದರೆ ಪರಮಜ್ಞಾನ ಸ್ವರೂಪನು.
ಒಂದಿನ ಉಂಟಾಗಿ, ಒಂದಿನ ಇಲ್ಲ[ವಾಗಿಪ್ಪ]
ಉಪಜೀವನಕ್ಕಲ್ಲ ಕಾಣಿರಣ್ಣಾ.
ಉಪಾಧಿ[ಕ], ನಿರೂಪಾಧಿಕನೆಂಬ ಸಂದೇಹಭ್ರಾಂತನಲ್ಲ ಕಾಣಿಭೋ.
ಸತ್ತು ಚಿತ್ತಾನಂದಭರಿತನು.
ಭಕ್ತನ ಪ್ರಾಣವೇ ತಾನಾಗಿಪ್ಪ ನಿತ್ಯ ಪರಿಪೂರ್ಣನೇ,
ಜಂಗಮದೇವನೆಂದರಿಯಲು ಯೋಗ್ಯ ಕಾಣಿ ಭೋ.
ಆ ಘನ ಚೈತನ್ಯವೆಂಬ ಜಂಗಮವ
ಮನೋಭಾವದಲ್ಲಿ ಆರಾಧಿಸಿ ಸುಖಿಯಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Jaṅgamada guṇavanu, jaṅgamada bhēdavanu
jaṅgamada rūpavanu hēḷihe kēḷiraṇṇā.
Jaṅgamavendare paramajñāna svarūpanu.
Ondina uṇṭāgi, ondina illa[vāgippa]
upajīvanakkalla kāṇiraṇṇā.
Upādhi[ka], nirūpādhikanemba sandēhabhrāntanalla kāṇibhō.
Sattu cittānandabharitanu.
Bhaktana prāṇavē tānāgippa nitya paripūrṇanē,
jaṅgamadēvanendariyalu yōgya kāṇi bhō.
Ā ghana caitan'yavemba jaṅgamava
manōbhāvadalli ārādhisi sukhiyādenu kāṇā,
mahāliṅgaguru śivasid'dhēśvara prabhuvē.