Index   ವಚನ - 477    Search  
 
ಅಂಗದ ಭಂಗವ ಲಿಂಗ ಸಂಗದಿಂದ ಪರಿಹರಿಸಬೇಕಯ್ಯ. ಮನೋಮಾಯವ ಅರುಹಿನ ಬಲದಿಂದ ಪರಿಹರಿಸಬೇಕಯ್ಯ. ಜೀವನೋಪಾಧಿಯ ಶಿವಾನುಭಾವದಿಂದ ಹರಿಯಬೇಕು ಕಾಣಿರೋ. ಕರಣದ ಕತ್ತಲೆಯ ಸದಮಲದ ಬೆಳಗನುಟ್ಟು ಪರಿಹರಿಸಬೇಕು ಕಾಣಿರೋ. ಜವ್ವನದ ಹೊರ ಮಿಂಚ, ಕಣ್ಣಿಗೆ ತೋರುವ ಕಾಮಜಾಲಂಗಳ ಶಿವಜ್ಞಾನಾಗ್ನಿಯ[ಲಿ]ಕ್ಕಿ ಸುಟ್ಟುರುಹಿ ಭಸ್ಮವಧರಿಸಬಲ್ಲರೆ ಶರಣನೆಂದೆಂಬೆ; ಉಳಿದವೆಲ್ಲಾ ಹುಸಿಯೆಂಬೆ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.