Index   ವಚನ - 483    Search  
 
ಇಪ್ಪತ್ತೈದು ಧರೆಯೊಳಗೆ ಮುಪ್ಪುರವಿಪ್ಪುದ ಕಂಡೆನಯ್ಯ. ಮುಪ್ಪುರದೊಳಗೆ ಸಪ್ತಸಾಗರ ಸುತ್ತಿ ಹರಿದು ಸರ್ವರ ತಲೆಯನೆತ್ತಲೀಸದು ನೋಡಾ. ಸಪ್ತಸಾಗರವನೊಂದು ಕಪ್ಪೆ ಕುಡಿದು ಸಪ್ತಸಾಗರವರತು ಕಪ್ಪೆ ಸತ್ತು, ಇಪ್ಪತ್ತೈದು ಧರೆಯಳಿದು ಮುಪ್ಪುರ ಬೆಂದುದ ಕಂಡೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.