Index   ವಚನ - 496    Search  
 
ನಾಲಗೆಯ ಕೊನೆಯಲ್ಲಿ ನಂಜಿನ ಸೋನೆ ಸುರಿವನ್ನಕ್ಕರ ಬಾರದುದ ಬಯಸುತ್ತಿಪ್ಪುದು ನೋಡಾ. ನಾಲಗೆಯ ನಂಜನೆ ಕೆಡಿಸಿ, ಅಮೃತವ ಸವಿಯಬಲ್ಲವರಾಗಿ ನಿಮ್ಮ ಶರಣರು ಅನುಪಮಸುಖಿಗಳಯ್ಯ. ನಿಮ್ಮ ಶರಣರೆಲ್ಲರ ಪಾದಕ್ಕೆ ನಮೋ ನಮೋಯೆನುತಿರ್ದೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.