Index   ವಚನ - 504    Search  
 
ಆಧಾರಶಕ್ತಿ ಅನಾದಿಪುರುಷನ ಕೂಡಲು ತ್ರೈಜಗದುತ್ಪತ್ತಿಯಾಯಿತ್ತು ನೋಡಾ. ತ್ರೈಜಗಹುಟ್ಟುವುದಕ್ಕತ್ತ ಮುನ್ನ ತಾ ಹುಟ್ಟಿದೆನೆಂದರಿಯಬಲ್ಲರೆ ಮೂರುಲೋಕದ ಉತ್ಪತ್ತಿ ಸ್ಥಿತಿ ಪ್ರಳಯದೊಳಗಲ್ಲ. ಆ ಪ್ರಳಯವಿರಹಿತನಾದಾತನೆ ಅಚ್ಚ ಶರಣನು. ಆತ ನಿತ್ಯ ನಿರಂಜನನು.ಆ ಮಹಾತ್ಮನನೇನೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.