Index   ವಚನ - 509    Search  
 
ಅರುಹಿನ ಜ್ಯೋತಿಯೆದ್ದಿತ್ತು, ಶರೀರವನೆಲ್ಲ ತುಂಬಿತ್ತು, ಮರೆವೆಯ ತಮ ಹರಿಯಿತ್ತು, ಕರಣಂಗಳ ತುಂಡಿಸಿತ್ತು, ವಿಷಯಂಗಳ ಶಿವನರಿಯಿತ್ತು. ದಶವಿಧೇಂದ್ರಿಯಂಗಳ ದಾಳಿಯ ನಿಲಿಸಿತ್ತು. ಪಂಚಮಹಾಭೂತಂಗಳಂಗಳ ಪ್ರಪಂಚುವ ಪರಿಹರಿಸಿತ್ತು. ಬ್ರಹ್ಮವೇ ತಾನೆಂಬ ಕುರುಹ ಮೈಗಾಣಿಸಿತ್ತು. ತಾನೆಂಬ ಕುರುಹನಳಿದ ಅವಿರಳ ಸಹಜನು ಭಕ್ತನು ನೋಡಾ, ಮಹಾಲಿಂಗುರು ಶಿವಸಿದ್ಧೇಶ್ವರ ಪ್ರಭುವೇ.