Index   ವಚನ - 516    Search  
 
ಆದಿಯಲ್ಲಿ ಹುಟ್ಟಿದಾತನು ಮೇದಿನಿಗಿಳಿದು ತನ್ನಾದಿಯಂತುವ ಮರೆದು ಮೇದಿನಿಯೆ ತಾನೆಂಬಂತಿಪ್ಪನು ನೋಡಾ. ಆದಿಯಿಂದಗಲಿ ಭೇದವಾದಿಯಾಗಿ ಅವಿಚಾರಿಯಾದನು ನೋಡಾ. ಮೇದಿನಿಯ ಹೃದಯದಲ್ಲಿ ನಾದಬ್ರಹ್ಮದ ಕಳೆ ಉದಯವಾಗಲು ಮೇದಿನಿಯ ಗುಣ ಧರ್ಮ ಕರ್ಮ ವರ್ಣಾದಿ ದೇವತೆಗಳಳಿದು ಆದಿಮಾಹೇಶ್ವರನೆಂದರಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.