Index   ವಚನ - 522    Search  
 
ಕಾಯಶೂನ್ಯನು ಕರಣಶೂನ್ಯನು ಮಾಹೇಶ್ವರನು. ಆತ್ಮಶೂನ್ಯನು ಸರ್ವಶೂನ್ಯ ನಿರಾಲಂಬಿ ಮಾಹೇಶ್ವರನು. ಆದಿ ಅನಾದಿಯ ಗೆದ್ದ ಅನಾದಿ ಪರಶಿವಮೂರ್ತಿಯ ಮನಮುಟ್ಟಿದ ಧೀರನಯ್ಯ ನಿಮ್ಮ ವೀರಮಾಹೇಶ್ವರನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.