Index   ವಚನ - 540    Search  
 
ಸಹಸ್ರದಳದಲ್ಲಿ ಸಚ್ಚಿದಾನಂದ ನಿತ್ಯ ಪರಿಪೂರ್ಣ ಸರ್ವಜ್ಞನು ಅನಂತಕೋಟಿ ಸೋಮ ಸೂರ್ಯರ ಬೆಳಗು ನೋಡಾ. ಸಾವಿರದೈವತ್ತೆರಡುಯೆಸಳಿನಲ್ಲಿ ತಾನಾಗಿ ತೊಳಗಿ ಬೆಳಗುವ ಏಕಮೇವಾದ್ವಿತೀಯನ ಪ್ರಸಾದದುದಯ ನೋಡಾ. ಆ ಪರಮ ಪ್ರಸಾದಗ್ರಾಹಕನಾಗಿ ಶುದ್ಧ ಶಿವಯೋಗಿಯಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.