Index   ವಚನ - 544    Search  
 
ದಶದಳ ಕಮಲದಲ್ಲಿ ಶಶಿಕಳೆ ಪಸರಿಸಲು ಶಶಿಕಳೆಯೊಳಗೆ ರವಿಯ ಬೆಳಗು ನೋಡಾ. ರವಿ ಶಶಿ ಶಿಖಿ ಏಕರಸಮಯವಾಗಿ ಓಂಕಾರವೊಂದಾದ ನಾದ, ಆ ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹುತ ವಿಶುದ್ಧಿ ಆಜ್ಞೇಯದಲ್ಲಿ. ಕಂಡು, ಕೂಡಿ ಸುಖಿಸುತಿರ್ದೆನಯ್ಯ, ಆ ನಾದ ಬೆಳಗಿನ ಕಳೆ ಶೂನ್ಯದಲ್ಲಿ ಅಡಗಲು E585 ನಾನು ನೀನಾದೆನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.