Index   ವಚನ - 556    Search  
 
ಉದಯ ಮುಖದ ಜ್ಯೋತಿಯಿಂ ಅಧೋಮುಖಕಮಲ ಊರ್ಧ್ವಮುಖವಾಗಿ ಷಡುಕಮಲಾಂಬುಜಂಗಳು ಉದಯವಾಗಿ ಆರುಕಮಲದ ಎಸಳು ಅರುವತ್ತಾಗಿ ಎಸೆವುತಿದಾವೆ ನೋಡಾ. ಅಂಬುಜಕಮಲ ಆರರಿಂದ ಸ್ವಯಂಭುವ ಪೂಜಿಸುತಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.